Public TV
'ಪಬ್ಲಿಕ್ ಟಿವಿ' ರೈಟ್ ಮೆನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಪ್ರಸ್ತುತಿ. 24 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಎಚ್.ಆರ್. ರಂಗನಾಥ್ ಸಾರಥ್ಯದಲ್ಲಿ 2012ರ ಫೆಬ್ರವರಿ 12 ರಂದು ಪಬ್ಲಿಕ್ ಟಿವಿ ಉದ್ಘಾಟನೆಗೊಂಡಿತು. 'ಯಾರ ಆಸ್ತಿಯೂ ಅಲ್ಲ, ಇದು ನಿಮ್ಮ ಟಿವಿ' ಎಂಬ ಘೋಷಣೆಯೊಂದಿಗೆ ಆರಂಭವಾದ ಪಬ್ಲಿಕ್ ಟಿವಿಗೆ ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಸುದ್ದಿ ಓದುವ ಮೂಲಕ ಚಾಲನೆ ನೀಡಿದರು. 2012 ಜನವರಿ 26ರಂದು ಪಬ್ಲಿಕ್ ಟಿವಿ ತನ್ನ ಪರೀಕ್ಷಾರ್ಥ ಪ್ರಸಾರ ಆರಂಭಿಸಿತು. ಪಬ್ಲಿಕ್ ಟಿವಿ ಕನ್ನಡದಲ್ಲಿ ಪ್ರಸಾರ ಆರಂಭಿಸಿದ 7ನೇ ಸುದ್ದಿವಾಹಿನಿ. ಪಬ್ಲಿಕ್ ಟಿವಿ 2ನೇ ವರ್ಷದ ಸಂಭ್ರಮಕ್ಕೆ ಖ್ಯಾತ ಹೋರಾಟಗಾರ ಅಣ್ಣಾ ಹಜಾರೆ ಸಾಕ್ಷಿಯಾದರು. 2014ರ ಫೆಬ್ರವರಿ 12ರಂದು ಪಬ್ಲಿಕ್ ಟಿವಿ ಕಚೇರಿಯಲ್ಲಿ ಅಣ್ಣಾ ಹಜಾರೆ ಜೊತೆ ವಿವಿಧ ಕ್ಷೇತ್ರಗಳ ಗಣ್ಯರ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
'Public TV' is a Kannada news broadcast brand of the Writemen Media Pvt. Ltd. Headed by H R Ranganath, who has served the media for 24 years, Public TV was inaugurated on 12th February 2012. Public TV was launched with the tag line- 'NO ONE'S PROPERTY, THIS IS YOUR TV'. Public TV began its trial testing on January 26.